ದಲಿತ ವಿದ್ಯಾರ್ಥಿ ಪರಿಷತ್ ನ “ಅಂಬೇಡ್ಕರ್ ರಾತ್ರಿ ಶಾಲೆ” ಆರಂಭ

DVP ಚಿತ್ರದುರ್ಗ : ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಚಿಕ್ಕಪ್ಪನಹಳ್ಳಿಯಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ದಲಿತ ವಿದ್ಯಾರ್ಥಿ ಪರಿಷತ್ ಮೂಲಕ “ಅಂಬೇಡ್ಕರ್ ರಾತ್ರಿ ಶಾಲೆ” ಗೆ ಆರಂಭಿಸಿ ಚಾಲನೆ ನೀಡಲಾಗಿದೆ.

ಇದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಆರಂಭವಾದ ಮೊದಲ ಅಂಬೇಡ್ಕರ್ ರಾತ್ರಿ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಮಕ್ಕಳಿಗೆ ಪರಿಷತ್ ನ ವಿಧ್ಯಾವಂತ ಮುಖಂಡರ ಮೂಲಕ ಮಕ್ಕಳಿಗೆ ಅವರ ಪಠ್ಯ ಪುಸ್ತಕಗಳ ಪಾಠದ ಬಗ್ಗೆ ಸಂದೇಹಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಶಾಲೆ ಮುಖ್ಯವಾಗಿ ಕಾರ್ಯ ಮಾಡಲಿದೆ.

ಬಡ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲು ಟ್ಯೊಶನ್ ಪಡೆಯಲು ಕಷ್ಟವಾಗುತ್ತಿರುವ ಈ ಕಾಲಘಟ್ಟದಲ್ಲಿ ಪರಿಷತ್ ನಾಡಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಸ್ಲಂ ಪ್ರದೇಶದಲ್ಲಿ “ಅಂಬೇಡ್ಕರ್ ರಾತ್ರಿ ಶಾಲೆ” ಆರಂಭ ಮಾಡಲು ನಿರ್ಧರಿಸಿದ್ದೆ. ಭವಿಷ್ಯದಲ್ಲಿ ಎಲ್ಲ ಈ ರಾತ್ರಿ ಶಾಲೆಗಳಿಗೆ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಿ ಮಕ್ಕಳಿಗೆ Spoken English ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ. ಈ ರಾತ್ರಿ ಶಾಲೆಗೆ ಮಕ್ಕಳಿಂದ ಒಳ್ಳೆಯ ಬೆಂಬಲ ವ್ಯಕ್ತವಾಗುತ್ತಿದೆ.

ನಾಡಿನ ವಿದ್ಯಾವಂತ ಯುವಜನರು “ಅಂಬೇಡ್ಕರ್ ರಾತ್ರಿ ಶಾಲೆ” ಮೂಲಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಆಗಲು ಮತ್ತು ಅಂಬೇಡ್ಕರ್ ರಾತ್ರಿ ಶಾಲೆಯ ಮೂಲಕ ತಮ್ಮ ಶಿಕ್ಷಣ ಸಮುದಾಯದ ಬಡ ಮಕ್ಕಳಿಗೆ ಉಪಯೋಗ ಆಗಲಿ ಎಂಬ ಉದ್ದೇಶ ಹೊಂದಿದ್ದರೆ, ಅಂತಹ ಯುವಜನರು ನಮ್ಮನ್ನು ಸಂಪರ್ಕಿಸಬಹುದಾಗಿದೆ.

ಬನ್ನಿ… ನಮ್ಮ ಶಿಕ್ಷಣ ಕೇವಲ ನೌಕರಿ ಪಡೆದು ನಮ್ಮ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತ ಮಾಡದೇ “My Education My Society” ಎಂಬ ಘೋಷ ವಾಕ್ಯದಂತೆ ಸಮುದಾಯದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿಟ್ಟೋಣ ಮತ್ತು ಪ್ರಬುದ್ಧ ಸಮಾಜ ನಿರ್ಮಾಣ ಮಾಡೋಣ…
ಜೈ ಭೀಮ್

One thought on “ದಲಿತ ವಿದ್ಯಾರ್ಥಿ ಪರಿಷತ್ ನ “ಅಂಬೇಡ್ಕರ್ ರಾತ್ರಿ ಶಾಲೆ” ಆರಂಭ

  1. ಅದ್ಭುತ ವಾದ ಕಾರ್ಯಕ್ರಮ ಉದ್ದೇಶ ಹೊಂದಿರುವ ನನ್ನ ಏಲ್ಲಾ ಪ್ರೀತಿಯ DVP ಗುರುವರಂದಕ್ಕೆ ನನ್ನ ಧನ್ಯವಾದಗಳು 🙏🙏🙏💐💐💐🙏🙏🙏😍

Leave a Reply

Your email address will not be published.

Back to Top