ದಲಿತ ವಿಧ್ಯಾರ್ಥಿ ಅಮಾನವೀಯ ಕೃತ್ಯವನ್ನು ಖಂಡಿಸಿ : ಆರೋಪಿಯನ್ನು ಕಠಿಣ ಶಿಕ್ಷೆ ನೀಡಲು DVP ಆಗ್ರಹ

DVP ಬೀದರ:- ಇಂದು ದಲಿತ ವಿಧ್ಯಾರ್ಥಿ ಪರಿಷತ್ ಬೀದರ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳು ಬೀದರ ರವರ ಮುಖಾಂತರ ರಾಜಸ್ತಾನದ ರಾಜ್ಯಪಾಲರಿಗೆ ಮನವಿಪತ್ರ ನೀಡಿದರು ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಭಾರತವು ಸ್ವತಂತ್ರವಾಗಿ 75 ವರ್ಷ ಕಳೆದ ಈ ಸಂಧರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತದೆ, ಆದರೆ ಇಂತಹ ಸಂಧರ್ಭದಲ್ಲಿ ಇಡೀ ದೇಶದ ಮಾನವ ಕುಲವೇ ತಲೆತಗ್ಗಿಸುವಂತಹ ನಾಚಿಕೆ ಪಡುವಂತಹ ಅಮಾನವೀಯ ಕೃತ್ಯ ರಾಜಸ್ಥಾನದಲ್ಲಿ ನಡೆದಿದೆ ಇದು ತೀವ್ರ ಖಂಡನೀಯ ವಿಷಯ.

ರಾಜಸ್ತಾನದ ಜಲೋರ ಜಿಲ್ಲೆಯ ಸರಸ್ವತಿ ವಿದ್ಯಾಮಂದಿರದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿ ಇಂದ್ರಕುಮಾರ್ ಅವರನ್ನು ಅಲ್ಲಿನ ಜಾತಿವಾದಿ ಶಿಕ್ಷಕ ಛೆಲ್ ಸಿಂಗ ತನಗೆ ಮೀಸಲಿರಿಸಿದ ಮಣ್ಣಿನ ನೀರಿನ ಮಡಿಕೆಯನ್ನು ಮುಟ್ಟಿದ ಎನ್ನುವ ಕಾರಣಕ್ಕೆ ದಲಿತ ವಿದ್ಯಾರ್ಥಿಗೆ ಜುಲೈ 20 ರಂದು ಮನಬಂದಂತೆ ಥಳಿಸಿದ್ದಾನೆ, ಅವನು ಆ ಮಗುವನ್ನು ಥಳಿಸಿದ್ದು ನೋಡಿದರೆ ಯಾವುದೋ ತುಂಬಾ ದೊಡ್ಡ ಕಾರಣಕ್ಕೆ ವಿದ್ಯಾರ್ಥಿಗೆ ಹೊಡೆದಂತಿದೆ, ಮಗುವಿನ ವಯಸ್ಸು ಕೇವಲ 9 ವರ್ಷ ಇನ್ನೂ ಏನು ತಿಳಿಯದ ವಯಸ್ಸು ಅದು, ಇನ್ನೂ ಕಲಿಯ ಬೇಕಾದ ಈ ವಯಸ್ಸಲ್ಲಿ ಮೇಲ್ಜಾತಿಯ, ಈ ಮನುವಾದಿ ಶಿಕ್ಷಕ ಮಗುವಿಗೆ ಸಾಯುವ ರೀತಿಯಲ್ಲಿ ಥಳಿಸಿದ್ದಾನೆ, ಶಿಕ್ಷಕನಿಂದ ಹಲ್ಲೆಗೊಳಗಾದ ವಿದ್ಯಾರ್ಥಿಯು ಕಿವಿಯಲ್ಲಿ ರಕ್ತಸ್ರಾವವಾಗುತ್ತಿತ್ತು, ಕಣ್ಣುಗಳು ತುಂಬಾ ಗಾಯವಾಗಿ ಉದುಕೊಂಡಿದ್ದವು, ದೇಹವನ್ನು ಮತ್ತೊಂದು ಮಗ್ಗುಲಿಗೆ ಬದಲಿಸಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ಮೊದಲಿಗೆ ಜಲೋರ, ಭಿಮಾಲಾ, ಹಾಗೂ ಉದಯಪುರ, ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಕರಿದ್ಯೊಯ್ಯಲಾಗಿತ್ತು, ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅಹಮದಾಬಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ವಿಧ್ಯಾರ್ಥಿ 25 ದಿನಗಳ ಬಳಿಕ ಅಂದರೆ ಆಗಸ್ಟ್ 13 ರಂದು ದೇಶ ಅಮೃತ ಮಹೋತ್ಸವ ಆಚರಿಸುವ ಸಂಧರ್ಭದಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದು ಅತ್ಯಂತ ನಾಚಿಕೆ ಮಾಡುವ ಸಂಗತಿ.

ಇದೊಂದೇ ಪ್ರಕರವಲ್ಲ ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ, ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ಈ ದೌರ್ಜನ್ಯವನ್ನು ನೋಡಿ ನಮಗೆ ಅಸಮಾಧಾನ ಮೂಡುತ್ತಿದ್ದ, ಸಮುದಾಯವನ್ನು ಹಿಂಸಿಸುತ್ತಿರುವ ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ದಲಿತರು ಕೊಡ ಮುಟ್ಟಿದರೆ ಕೊಲ್ಲುತ್ತಾರೆ. ದಲಿತರು ಮದುವೆಯಲ್ಲಿ ಕುದುರೆ ಸವಾರಿ ನಡೆಸಿದರೆ, ಮೀಸೆ ಬಿಟ್ಟರೆ ಕೊಲ್ಲುತ್ತಾರೆ. ಪ್ರಕರಣ ದಾಖಲಿಸಿದರೂ ಪೊಲೀಸರು ಬಿ ರಿಪೋರ್ಟ್ ಹಾಕಿ ಕೇಸು ಮುಚ್ಚಿ ಹಾಕುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ವಿಳಂಬ ನೀತಿ ಅನುಸರಿಸುತ್ತಿದೆ. ಕೆಲವು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೆ ಇಂತಹ ಪ್ರಕಾರಗಳನ್ನು ತಡೆಯಲು ಯಾವುದೇ ಸರ್ಕಾರದಿಂದಲೂ ಸಾಧ್ಯವಾಗುತ್ತಿಲ್ಲ, ಹೇಳಿಕೆಗಳು ಕೇವಲ ಚುನಾವಣೆಗೆ ಸಾಧ್ಯವಾಗುತ್ತವೆ.

ಹಾಗಾಗಿ ರಾಜಸ್ತಾನದಲ್ಲಿ ನಡೆದ ಈ ಕೃತ್ಯವನ್ನು ಖಂಡಿಸುತ್ತ ಮತ್ತೊಮ್ಮೆ ಹಿಂತಹ ಪ್ರಕಾರಗಳು ಮರುಕಳಿಸದಂತೆ ತಡೆಯಲು ಈಗಾಗಲೇ ಪೊಲೀಸರ ಬಂಧನದಲ್ಲಿರುವ ಆ ಮನುವಾದಿ ಶಿಕ್ಷಕನು ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲು ತಮ್ಮ ನೇತೃತ್ವದಲ್ಲಿ ರಾಜಸ್ಥಾನ ಸರ್ಕಾರಕ್ಕೆ ತಿಳಿಸಲು ತಮ್ಮಲ್ಲಿ ದಲಿತ ವಿಧ್ಯಾರ್ಥಿ ಪರಿಷತ್ ಬೀದರ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಹಿಂಗೊಲೆ, ಹುಮನಾಬಾದ ತಾಲ್ಲೂಕು ಸಂಚಾಲಕ ರಮೇಶ ಮಾಲೆ, ಯುವ ಮುಖಂಡ ವಿನೀತ್ ಗಿರಿ ಹಾಜರಿದ್ದರು.

3 thoughts on “ದಲಿತ ವಿಧ್ಯಾರ್ಥಿ ಅಮಾನವೀಯ ಕೃತ್ಯವನ್ನು ಖಂಡಿಸಿ : ಆರೋಪಿಯನ್ನು ಕಠಿಣ ಶಿಕ್ಷೆ ನೀಡಲು DVP ಆಗ್ರಹ

Leave a Reply

Your email address will not be published.

Back to Top