ಪರಿಷತ್ ನ ಮಸ್ಕಿ ತಾಲೂಕ ಸಮಿತಿ ರಚನೆ

DVP ರಾಯಚೂರು : ಮಸ್ಕಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಪರಿಷತ್ ನ ಸಭೆ ನಡೆಸಿ ನೂತನವಾಗಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಸಮಿತಿಯನ್ನು ರಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕ ಸಂಚಾಲಕರಾಗಿ ರಮೇಶ್ ನಂಜಲದಿನ್ನಿ, ಸಹ ಸಂಚಾಲಕರಾಗಿ ರಮೇಶ್ ಮ್ಯಾಗಳಮನಿ ಹಾಲಾಪುರ್ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ನಂಜಲದಿನ್ನಿ, ಸಂಘಟನಾ ಕಾರ್ಯದರ್ಶಿಯಾಗಿ ಹುಸೇನಪ್ಪ ಇರಕಲ್ ಇವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಸಮಿತಿಯ ನಿರ್ದೇಶನದ ಮೇರೆಗೆ ರಾಯಚೂರು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಸ್ಕಿ ತಾಲೂಕ ಸಮಿತಿಯನ್ನು ರಚನೆ ಮಾಡಿ, ತಕ್ಷಣವೇ ಜಾರಿಗೆ ಬರುವಂತೆ ನೂತನವಾಗಿ ಆಯ್ಕೆಯಾದ ಮಸ್ಕಿ ತಾಲ್ಲೂಕು ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ
ಮೌನೇಶ ತುಗ್ಗಲದಿನ್ನಿ, ಯುವ ಮುಖಂಡ ಅಂಬಣ್ಣ ಜಿನ್ನಾಪುರ್, ವಿದ್ಯಾರ್ಥಿ ಮುಖಂಡ ರಶೀದ್ ಬನ್ನಿಗನೂರು, ಮಹಿಳಾ ಹೋರಾಟಗಾರ್ತಿಯಾದ ನಾಗರತ್ನ ಮಸ್ಕಿ ಅಲ್ಲದೇ ಹಲವಾರು ವಿದ್ಯಾರ್ಥಿ ಯುವ ಮಿತ್ರರರು ಹಾಗೂ ಪರಿಷತ್ ನ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published.

Back to Top