ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ವಿಯಾಗಲಿ : ಅಕ್ಷತಾ ಕೆ ಸಿ

ಹಾವೇರಿ, ಮೇ. 29 : ದೇಶ ಅಲ್ಲದೇ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಂವಿಧಾನ ಶಿಲ್ಪಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಆಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ವಿಯಾಗಲಿ ಎಂದು
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ಅಕ್ಷತಾ ಕೆ ಸಿ ಹೇಳಿದರು.

ದಲಿತ ವಿದ್ಯಾರ್ಥಿ ಪರಿಷತ್ ಕರ್ನಾಟಕ ಹಮ್ಮಿಕೊಂಡಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸ್ಪರ್ಧಾತ್ಮಕ ಪರೀಕ್ಷೆ ಪೋಸ್ಟರ್ ಅನ್ನು ನಗರದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದಲಿತ ವಿದ್ಯಾರ್ಥಿ ಪರಿಷತ್ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ 131 ನೇ ಜಯಂತಿ ಅಂಗವಾಗಿ ಅವರ ಕುರಿತು ಸ್ಪರ್ಧಾತ್ಮಕ ಪರೀಕ್ಷೆ ಆಯೋಜನೆ ಮಾಡುವ ಮೂಲಕ ನಾಡಿನಲ್ಲಿ ಅಂಬೇಡ್ಕರ್ ಅವರ ವಿಚಾರಗಳನ್ನು ಬಿತ್ತುವ ಕಾರ್ಯಮಾಡುತ್ತಿರುದು ನಿಜಕ್ಕೂ ಶ್ಲಾಘನೀಯ ಆಗಿದೆ ಎಂದು ಅಕ್ಷತಾ ಕೆ. ಸಿ ಹೇಳಿದರು.

ಇದೇ ವೇಳೆ ಮಾತನಾಡುತ್ತ ಪರಿಷತ್ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ ಅವರು ಪರೀಕ್ಷೆ ಬಗ್ಗೆ ಮಾಹಿತಿ ನೀಡಿದ್ದರು.

ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ಜಿಲ್ಲಾಧ್ಯಕ್ಷರಾದ ಮಾಲತೇಶ್ ಅಂಗೂರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಶ್ರೀಕಾಂತ್ ಗಡ್ಡಿ, ಚಲವಾದಿ ಮಹಾಸಭಾ ಜಿಲ್ಲಾ ಅಧ್ಯಕ್ಷರು ಶಂಬಣ್ಣ ಕಳಸದ, ದಲಿತ ಯುವ ಮುಖಂಡರಾದ ಮಂಜುನಾಥ್ ಸಿರಗುಪ್ಪಿ, ರಾಜು ಗಡ್ಡಿ, ರೋಷನ್ ಮಲ್ಲಾಡದ, ಕುಮಾರ್ ತೋಂಡರು, ಸಚಿನ್ ಮರಿಯನ್ನವರ್, ಅಣ್ಣಪ್ಪ ತಗಡಿನಮನಿ, ಪರಶುರಾಮ್ ಮಾಳಗಿ, ಮಂಜುನಾಥ್ ಕಿಚ್ಚ, ಜಗದೀಶ್ ಕೊಂಡೆಮನವರ್, ಲಿಂಗರಾಜ್ ಹಾದಿಮನಿ, ಸಂತೋಷ್ ಜೋಗಿ, ಮಂಜುನಾಥ್ ಹಾವೇರಿ, ಶರಣಪ್ಪ ಕೋಳೂರು, ಜಿಲಾನಿ ಮಲ್ಲಾಡದ, ವಾಸಿಮ್ ಮಕಾಂದಾರ್, ಆಶ್ಫಾಕ್ ಎಂ ಎನ್, ವಸಂತ ಬೆಟಗೇರಿ, ಕಾದರ್ ಧಾರವಾಡ, ಮೌಲಾಲಿ ಬೂದಗಟ್ಟಿ, ಮೆಹತಾಬ್ ವಾಲಿಕರ್ ಅಲ್ಲದೇ ಹಲವರು ಹಾಜರಿದ್ದರು.

One thought on “ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ವಿಯಾಗಲಿ : ಅಕ್ಷತಾ ಕೆ ಸಿ

Leave a Reply

Your email address will not be published.

Back to Top