ವಿದ್ಯಾರ್ಥಿಗಳು ಡಾ.ಬಾಬಾ ಸಾಹೇಬರ ಆರ್ಥಿಕಚಿಂತನೆಗಳು ತಿಳಿದುಕೊಂಡು ಅರ್ಥಿಕ ಸ್ವಾವಲಂಬಿಯಾಗಬೇಕು : ಬಾಬುನಾಯಕ್

DVP ಮೈಸೂರು : ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕ ವತಿಯಿಂದ ಡಾ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಕುರಿತಾದ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಪೋಸ್ಟರ್ ಅನ್ನು ಖ್ಯಾತ
ಉದ್ಯಮಿ‌ ಹಾಗೂ ಸಮಾಜ ಸೇವಕರಾದ ಬಾಬುನಾಯಕ್ ರವರು ಬಿಡುಗಡೆ ಮಾಡಿದರು.

ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಡಾ.ಬಾಬಸಾಹೇಬರ ಆರ್ಥಿಕಚಿಂತನೆಗಳು ತಿಳಿದುಕೊಂಡು ಅರ್ಥಿಕ ಸ್ವಾವಲಂಬಿಯಾಗಬೇಕು ಎಂದರು.

ಇದೇ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ಶುಭ ಹಾರೈಸಿದರು.

ಈ ವೇಳೆ ಮೈಸೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾದ ವಿಶ್ವಪ್ರಸಾದ್ ಹೆಚ್.ಪಿ, ಉಪಾಧ್ಯಕ್ಷ ಮಹೇಂದ್ರ, ಜಂಟಿ ಕಾರ್ಯದರ್ಶಿ ದೀಲಿಪ್, ಖಜಾಂಚಿ ಸತೀಶ್, ಸಂಘಟನಾ ಕಾರ್ಯದರ್ಶಿ ಉಮೇಶ್ ಹಾಗೂ ಕುಮಾರ್ ಮತ್ತಿತ್ತರು ಇದ್ದರು.

2 thoughts on “ವಿದ್ಯಾರ್ಥಿಗಳು ಡಾ.ಬಾಬಾ ಸಾಹೇಬರ ಆರ್ಥಿಕಚಿಂತನೆಗಳು ತಿಳಿದುಕೊಂಡು ಅರ್ಥಿಕ ಸ್ವಾವಲಂಬಿಯಾಗಬೇಕು : ಬಾಬುನಾಯಕ್

Leave a Reply

Your email address will not be published.

Back to Top