ಪರಿಷತ್ ಕಾರ್ಯಲಯದಲ್ಲಿ ಬಸವ ಜಯಂತಿ ಆಚರಣೆ

ವಿಜಯಪುರ : ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಲಯದಲ್ಲಿ ಸಮಾತವಾದಿ ಕಾಯಕಯೋಗಿ ಅಣ್ಣ ಬಸವಣ್ಣ ನವರ ಜನ್ಮ ಜಯಂತಿ ಪ್ರತಿವರ್ಷದಂತೆ ಈ ವರ್ಷವೂ ಆಚರಿಸಲಾಯಿತು.

ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿಯವರು ಮಾತನಾಡಿ, ಬುದ್ಧನ ನಂತರ ಸಮಾನತೆಯ ಕ್ರಾಂತಿ ಮಾಡಿದ ಮಹಾನ್ ಮಾನವತಾವಾದಿ ಆದ ಅಣ್ಣ ಬಸವಣ್ಣ ಅವರು 12ನೇ ಶತಮಾನದಲ್ಲಿ ಜನಿಸಿದರು. ತಮ್ಮ ವಚನಗಳ ಮೂಲಕ ವಿಶ್ವಕ್ಕೆ ಪ್ರಸಿದ್ದಿ ಪಡೆದ ಮೊದಲ ವ್ಯಕ್ತಿ ಬಸವಣ್ಣನವರು.

ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಜ್ಞಾನಿ ಬಸವಾದಿ ಶರಣರು. ಸಾವಿರಾರು ವೇಶ್ಯೆಯರನ್ನ ಶರಣಿಯರಾನ್ನಾಗಿ ಮಾಡಿದಲ್ಲದೇ, ಅಸ್ಪೃಶ್ಯರನ್ನು ಲಿಂಗಾಯತಾರನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.

ಅದಕ್ಕಾಗಿ ನಮ್ಮ ಮುಂದಿನ ಪೀಳಿಗೆ ಜಗಜ್ಯೋತಿ ಬಸವಣ್ಣ ನವರ ನಾಸ್ತಿಕ ಸಿದ್ದಾಂತವನ್ನು ಅರ್ಥಯಿಸಿಕೊಂಡು ಅವರ ಆದರ್ಶ ಆಚಾರಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಬಾಲಾಜಿ ಕಾಂಬಳೆ,ಅಕ್ಷಯ್ ಕುಮಾರ ಅಜಮನಿ, ಆನಂದ ಮೂದುರ, ಕಾಶೀನಾಥ ಕಟ್ಟಿಮನಿ,ರವಿ ಪೂಜಾರಿ ಯಮನೂರಿ ಹರಿಜನ್, ಪರಶುರಾಮ್ ಕಟ್ಟಿಮನಿ ಮುಂತಾದವರು ಭಾಗಿಯಾಗಿದ್ದರು.

Leave a Reply

Your email address will not be published.

Back to Top