ಅಂಬೇಡ್ಕರ್ ವಿಚಾರಧಾರೆ ಎಲ್ಲರಿಗೂ ಮುಟ್ಟಲಿ : ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ. 01, ಮೇ : ದಲಿತ ವಿದ್ಯಾರ್ಥಿ ಪರಿಷತ್ ಹಮ್ಮಿಕೊಂಡಿರುವ ರಾಜ್ಯಮಟ್ಟದ “ಬಾಬಾ ಸಾಹೇಬ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ’ ಪೋಸ್ಟರ್ ಅನ್ನು ಇಂದು ಮಾಜಿ ಸಚಿವ ಹಾಗೂ ಹಾಲಿ ಚಿತ್ತಾಪುರ ಶಾಸಕರಾದ ಮಾನ್ಯ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆ ಮಾಡುವ ಮೂಲಕ ಕಲಬುರಗಿ ಜಿಲ್ಲೆಯ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಖರ್ಗೆ ಅವರು, ಒಳ್ಳೆಯ ಉದ್ದೇಶದಿಂದ ಕಾರ್ಯ ಮಾಡ್ತಾ ಇದ್ದೀರಿ. ಈ ಪರೀಕ್ಷೆ ಯಶಸ್ವಿಯಾಗಲಿ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆ ಎಲ್ಲರಿಗೂ ಈ ಮೂಲಕ ಮುಟ್ಟಲಿ ಎಂದರು.

ಈ ಸಂದರ್ಭದಲ್ಲಿ ಪರಿಷತ್ ನ ಜಿಲ್ಲಾ ಸಂಚಾಲಕರಾದ ಆನಂದ್ ಸಿನ್ನೂರ್, ಕಲಬುರಗಿ ನಗರ ಘಟಕದ ಸಂಚಾಲಕರಾದ ಅಭಿಷೇಕ್ ಚಕ್ರವರ್ತಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಗೌತಮ್, ಕಲಬುರಗಿ ತಾಲೂಕು ಘಟಕದ ಸಂಚಾಲಕರಾದ ರಘುನಾಥ್ ಸಿ ಬಬಲಾದ, ಸಂಘಟನಾ ಕಾರ್ಯದರ್ಶಿ ಸಚಿನ್ ಕೆ ಜೋಗನ್, ಕಾಂಗ್ರೆಸ್ ಮುಖಂಡರಾದ ಧರ್ಮರಾಜ್ ಹೇರೂರ್ ಉಪಸ್ಥಿತರಿದ್ದರು.

4 thoughts on “ಅಂಬೇಡ್ಕರ್ ವಿಚಾರಧಾರೆ ಎಲ್ಲರಿಗೂ ಮುಟ್ಟಲಿ : ಶಾಸಕ ಪ್ರಿಯಾಂಕ್ ಖರ್ಗೆ

Leave a Reply

Your email address will not be published.

Back to Top