ಪರಿಷತ್ ರಾಜ್ಯ ಮುಖಂಡ ಅಜಿತ್ ಮಾದರ ಬರೆದ “ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅವಿಸ್ಮರಣೀಯ ಸಂಗತಿಗಳು” ಎಂಬ ಪುಸ್ತಕ ಬಿಡುಗಡೆ

DVP : ಬೆಳಗಾವಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ ನಡೆದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 131ನೇ ಯ ಜಯಂತಿಯ ಸಮಾರೋಪ ಸಮಾರಂಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ 25ನೇ ಬೆಳ್ಳಿ ಹಬ್ಬದ ಪ್ರಯುಕ್ತ ದಲಿತ ವಿದ್ಯಾರ್ಥಿ ಪರಿಷತ್ ನ ರಾಜ್ಯ ಸಂಪರ್ಕ ಕಾರ್ಯದರ್ಶಿಯಾದ ಅಜಿತ ಮಾದರ ಅವರು ಬರೆದ “ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅವಿಸ್ಮರಣೀಯ ಸಂಗತಿಗಳು ಮತ್ತು ನುಡಿಮುತ್ತುಗಳು” ಎಂಬ ಚೊಚ್ಚಲ ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಪುಸ್ತಕವನ್ನು ಬೆಳಗಾವಿ ಜಿಲ್ಲಾಧಿಕಾರಿಗಳಾದ M, G, ಹೀರೆಮಠ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಉಮಾ ಸಾಲಿಗೌಡ್ರ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಪುಸ್ತಕವು ಲೋಕಾರ್ಪಣೆಗೊಂಡಿತ್ತು.

One thought on “ಪರಿಷತ್ ರಾಜ್ಯ ಮುಖಂಡ ಅಜಿತ್ ಮಾದರ ಬರೆದ “ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಅವಿಸ್ಮರಣೀಯ ಸಂಗತಿಗಳು” ಎಂಬ ಪುಸ್ತಕ ಬಿಡುಗಡೆ

Leave a Reply

Your email address will not be published.

Back to Top