ರಾಯಚೂರು : ಸಿಂಧನೂರು ತಾಲ್ಲೂಕು ಘಟಕ ರಚನೆ

ನೂತನ ಪದಾಧಿಕಾರಿಗಳು

DVP : ಇಂದು ದಲಿತ ವಿದ್ಯಾರ್ಥಿ ಪರಿಷತ್ ನ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸಮಿತಿಯನ್ನು ಜಿಲ್ಲಾ ಸಂಚಾಲಕರಾದ ಮೌನೇಶ ಜಾಲವಾಡಗಿ ಹಾಗೂ ದಲಿತ ಸಾಹಿತ್ಯ ಪರಿಷತ್ ನ ಪ್ರಗತಿಪರ ಸಾಹಿತಿಗಳ ನೇತೃತ್ವದಲ್ಲಿ ಸಭೆ ನಡೆಸುವ ಮೂಲಕ ರಚನೆ ಮಾಡಲಾಯಿತು.

ಸಭೆಯಲ್ಲಿ ನೂತನ ತಾಲೂಕು ಸಮಿತಿಯ ತಾಲ್ಲೂಕು ಸಂಚಾಲಕರಾಗಿ ರಮೇಶ ಹಲಗಿ, ಸಹಸಂಚಾಲಕರಾಗಿ ಬಸವರಾಜ ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಸಾಸಲಮರಿ ಸಂಘಟನಾ ಕಾರ್ಯದರ್ಶಿಯಾಗಿ ತಾಯಪ್ಪ ತಿಡಿಗೋಳ ಅಲ್ಲದೆ ಇನ್ನು ಹಲವಾರು ಸಮಾನಮನಸ್ಕ ವಿದ್ಯಾರ್ಥಿ ಮಿತ್ರರನ್ನು ಆಯ್ಕೆ ಮಾಡಲಾಗಿದೆ.

Leave a Reply

Your email address will not be published.

Back to Top