ಮುದ್ದೇಬಿಹಾಳ ಅಂಬೇಡ್ಕರ್ ಜಯಂತಿ ಆಚರಣೆ

DVP : ದಲಿತ ವಿದ್ಯಾರ್ಥಿ ಪರಿಷತ್ ಮುದ್ದೇಬಿಹಾಳ ತಾಲ್ಲೂಕು ಘಟಕ ವತಿಯಿಂದ ನಿನ್ನೆ ಡಾ ‌ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಪರಿಷತ್ ನ ರಾಜ್ಯಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟ ಕಟ್ಟುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

ವಿಧ್ಯಾರ್ಥಿಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣ ಕೃತಿ ಜೊತೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕೃತಿಯನ್ನು ಉಚಿತವಾಗಿ ನೀಡಲಾಯಿತು.

ಈ ವೇಳೆ ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಹಾದಿಮನಿ, ಡಿ.ಬಿ ಮುದೂರ ( ಕರ್ನಾಟಕ ಕರ್ನಾಟಕ ದಲಿತ ಸಂಘರ್ಷ, ರಾಜ್ಯ ಸಂಚಾಲಕರು) ಪ್ರತಿಭಾ ಅಂಗಡಗೇರಿ (ಪುರಸಭೆ ಅಧ್ಯಕ್ಷರು) ದೇವರಾಜ ಹಂಗರಗಿ (ಡಿಎಸ್ಎಸ್ ಮುಖಂಡರು) ಬಸು ಪೂಜಾರಿ (ದೌರ್ಜನ್ಯ ಕಮಿಟಿಯ ಸದಸ್ಯರು) ಪ್ರಕಾಶ್ ಸರೂರ (ಡಿಎಸ್ಎಸ್ ಮುಖಂಡರು) ಸಂಗು ಚಲವಾದಿ,
ರೇಖಾ ಹತ್ತಿಕಾಳ (ವಸತಿ ನಿಲಯಪಾಲಕರು) ಸಿದ್ದು ಚಲವಾದಿ (ಪತ್ರಕರ್ತರು) ಅಕ್ಷಯಕುಮಾರ ಅಜಮನಿ,
ಆನಂದ ಮುದೂರ, ಅಲ್ಲದೇ ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.

3 thoughts on “ಮುದ್ದೇಬಿಹಾಳ ಅಂಬೇಡ್ಕರ್ ಜಯಂತಿ ಆಚರಣೆ

Leave a Reply

Your email address will not be published.

Back to Top